ಅನಂತಾಚಾರಿ
	
ಕನ್ನಡ ಅಚ್ಚುಮೊಳೆಗಳನ್ನು ಎರಕ ಹೊಯ್ಯುವ ವಿಧಾನವನ್ನು ಕಂಡುಹಿಡಿದ ಕೀರ್ತಿ ಅತ್ತಾವರ ಅನಂತಾಚಾರಿಗೆ ಸಲ್ಲುವುದು. ಮಂಗಳೂರಿನಲ್ಲಿ ಅನುಭವ ಪಡೆದ ಈತ ಬೊಂಬಾಯಿಗೆ ಹೋಗಿ ನಿರ್ಣಯಸಾಗರ ಮುದ್ರಣಾಲಯದಲ್ಲಿ ತರಬೇತಿ ಪಡೆದ. ಬೊಂಬಾಯಿನ ಗುಜರಾತಿ ಮೊಳೆಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ದೇವನಾಗರಿ ಲಿಪಿಯನ್ನು ಕೆತ್ತಿ ಎರಕಹೊಯ್ಯುವ ಕಾರ್ಯದಲ್ಲಿ ನೆರವಾದ. ಅನಂತರ ಧಾರವಾಡಕ್ಕೆ ಬಂದು ಕರ್ನಾಟಕ ಪ್ರೆಸ್ಸಿನಲ್ಲಿ ಕೆಲಸ ಪ್ರಾರಂಭಿಸಿ, ಅಲ್ಲಿ ಕನ್ನಡ ಅಚ್ಚುಮೊಳೆಗಳನ್ನು ತಯಾರಿಸಿ ಅಲ್ಲಿನ ಮುದ್ರಣಾಲಯಗಳಿಗೆ ಒದಗಿಸಿದ. ಅಲ್ಲಿಂದ ತನ್ನ ಹುಟ್ಟೂರಾದ ಮಂಗಳೂರಿಗೆ ಬಂದು ಅಲ್ಲಿ ಅದೇ ಕೆಲಸವನ್ನು ಮುಂದುವರಿಸಿದ. ಈತ ತಯಾರಿಸಿದ ಮೊಳೆಗಳನ್ನು ಪ್ರಮುಖ ಮುದ್ರಣಾಲಯಗಳಾದ ಧರ್ಮಪ್ರಕಾಶ ಪ್ರೆಸ್, ಶಾರದಾ ಪ್ರೆಸ್, ಕೆನರಾ ಪ್ರೆಸ್, ಪ್ರಭಾಕರ ಪ್ರೆಸ್, ಮತ್ತು ಬಾಸೆಲ್ ಮಿಷನ್ ಪ್ರೆಸ್ ಉಪಯೋಗಿಸಿ ಜನಾದರಣೀಯವನ್ನಾಗಿ ಮಾಡಿದವು. ಅನಂತಾಚಾರಿ ಕನ್ನಡದ ಮುದ್ರಣ ಮೊಳೆಗಳನ್ನು ಎರಕವಾಗಿ ಹೊಯ್ಯುವ ವಿಧಾನವನ್ನು ಪ್ರಥಮ ಬಾರಿಗೆ ಕಂಡುಹಿಡಿದುದರ e್ಞÁಪಕಾರ್ಥವಾಗಿ ಅವನಿಂದ ಪ್ರಾರಂಭದಲ್ಲಿ ಕೆತ್ತಲ್ಪಟ್ಟ ದೇವನಾಗರಿ ಲಿಪಿಯ ವರ್ಣಮಾಲೆಯನ್ನು ಅನಂತಷೇಡ್ ಎಂದು ಕರೆಯಲಾಗುತ್ತಿದೆ.								
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ